ಅರಾವಳಿ ಹಸಿರು ಗೋಡೆ ಯೋಜನೆ

ಅರಾವಳಿ ಹಸಿರು ಗೋಡೆ ಯೋಜನೆ

ಏಕೆ ಸುದ್ದಿಯಲ್ಲಿದೆ?

  • ಇತ್ತೀಚೆಗೆ, ಮರುಭೂಮಿ ವಿಸ್ತರಣೆ ತಡೆ ಹಾಗೂ ಭೂ ಸವಕಳಿ ತಪ್ಪಿಸುವ ಹಿನ್ನೆಲೆಯಲ್ಲಿ ಬೆಟ್ಟಗಳ ಸುತ್ತ ಅರಾವಳಿ ಹಸಿರು ಗೋಡೆ ಯೋಜನೆ’ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದರ್‌ ಯಾದವ್ ಅವರು ಚಾಲನೆ ನೀಡಿದರು.

ಅರಾವಳಿ ಹಸಿರು ಗೋಡೆ ಯೋಜನೆ(Aravali Green Wall Project)

“ಅರಾವಳಿ ಹಸಿರು ಗೋಡೆ ಯೋಜನೆ’:
>ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಯೋಜನೆ.
>ಇದು ಭಾರತದ ನಾಲ್ಕು ರಾಜ್ಯಗಳಲ್ಲಿರುವ ಅರಾವಳಿ ಶ್ರೇಣಿಯ ಸುತ್ತಲಿನ 5 ಕಿಮೀ, ಬಫರ್ ಪ್ರದೇಶವನ್ನು ಹಸಿರೀಕರಣಗೊಳಿಸುವ ಪ್ರಮುಖ ಉಪಕ್ರಮ.
>ಮರುಭೂಮಿ ವಿಸ್ತರಣೆ ತಡೆ ಮತ್ತು ಭೂಮಿಯ ರಕ್ಷಣೆಗಾಗಿ ಹಸಿರು ಕಾರಿಡಾರ್‌ಗಳನ್ನು ರಚಿಸುವುದು ಈ ಯೋಜನೆಯ ಉದ್ದೇಶ.
>ಈ ಯೋಜನೆಯು ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ ರಾಜ್ಯಗಳನ್ನು ಒಳಗೊಂಡಿದೆ. 
>ಈ ರಾಜ್ಯಗಳಲ್ಲಿ 60 ಲಕ್ಷ ಹೆಕ್ಟೇ‌ ಭೂಮಿಯನ್ನು ಅರಾವಳಿ ಬೆಟ್ಟಗಳ ಭೂಪ್ರದೇಶ ವ್ಯಾಪಿಸಿದೆ.
>ಈ ಯೋಜನೆಯು ಆಫ್ರಿಕಾದ ‘ಗ್ರೇಟ್ ಗ್ರೀನ್ ವಾಲ್’ ಯೋಜನೆಯಿಂದ ಪ್ರೇರಿತವಾಗಿದೆ.

ಅರಾವಳಿ ಪರ್ವತ ಶ್ರೇಣಿ(Aravali Mountain range):

ಅರಾವಳಿ ಪರ್ವತ ಶ್ರೇಣಿ(Aravali Mountain range):
>ಇದು ಭಾರತದಲ್ಲಿನ ಮಡಿಕೆ ಪರ್ವತಗಳ ಅತ್ಯಂತ ಹಳೆಯ ಶ್ರೇಣಿಯಾಗಿದೆ.
>ಇದು ಗುಜರಾತ್‌ನಿಂದ ದೆಹಲಿಯವರೆಗೆ (ರಾಜಸ್ಥಾನ ಮತ್ತು ಹರಿಯಾಣದ ಮೂಲಕ) 670 ಕಿಮೀ ವ್ಯಾಪಿಸಿದೆ.
>ಅರಾವಳಿ ಶ್ರೇಣಿಯ ಅತ್ಯಂತ ಎತ್ತರದ ಶಿಖರವೆಂದರೆ ಮೌಂಟ್ ಅಬು ಮೇಲಿನ ಗುರು ಶಿಖರ.

Aravali Green Wall Project is associated with which Ministry?

ಅರಾವಳಿ ಹಸಿರು ಗೋಡೆ ಯೋಜನೆಯು ಯಾವ ಸಚಿವಾಲಯದೊಂದಿಗೆ ಸಂಬಂಧಿಸಿದೆ?

  1. ಭೂ ವಿಜ್ಞಾನ ಸಚಿವಾಲಯ
  2. ಶಿಕ್ಷಣ ಸಚಿವಾಲಯ
  3. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ
  4. ಮಾನವ ಹಕ್ಕುಗಳ ಸಚಿವಾಲಯ
Share

Leave a Comment

Your email address will not be published. Required fields are marked *